| Sri S L Bhyrappa |
ಎಸ್.ಎಲ್.ಭೈರಪ್ಪನವರು ನಿಸ್ಸಂಶಯವಾಗಿ ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರು. 1961ರಲ್ಲಿ ಪ್ರಕಟವಾದ ‘ಧರ್ಮಶ್ರೀ‘ಯಿಂದ ಹಿಡಿದು ಇತ್ತೀಚಿನ ‘ಕವಲು‘ವರೆಗೆ, ಪ್ರಕಟವಾಗಿರುವ 22ಕಾದಂಬರಿಗಳೂ ಹಲವು ಮರುಮುದ್ರಣ ಕಂಡಿವೆ. ಸಾಗರದಾಚೆ ಕೂಡ ಭೈರಪ್ಪನವರಿಗೆ ತುಂಬಾ ಅಭಿಮಾನಿಗಳಿದ್ದಾರೆ. ಅಕಾಡೆಮಿಕ್ ವಲಯಗಳಲ್ಲಿ ಏನೇ ವಾದ-ವಿವಾದಗಳಿರಲಿ, ಸಾಮಾನ್ಯ ಓದುಗರೇಕೆ ಭೈರಪ್ಪನವರನ್ನು ಇಷ್ಟೊಂದು ಇಷ್ಟಪಡುತ್ತಾರೆ? ಯಾವ ಜನಾಕರ್ಷಣ ಯಂತ್ರದ ಬಲ ಅವರ ಬರಹಗಳಿಗಿದೆ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕ ಹೊರಡುವುದು ಅವರಕ ಕಾದಂಬರಿಗಳನ್ನು ಓದುವಷ್ಟೇ ಆಸಕ್ತಿಕರ.
ಇವರ ಜನಪ್ರಿಯತೆಯ ಬಗ್ಗೆ ನೆನೆಯುವಾಗಲೆಲ್ಲ ಮತ್ತೆ ಮತ್ತೆ ನೆನಪಾಗುವವರೆಂದರೆ ಕೆ.ಎಸ್. ನರಸಿಂಹಸ್ವಾಮಿ. ನವೋದಯ, ನವ್ಯ, ಬಂಡಾಯ ಮುಂತಾದ ಎಲ್ಲ ಹಣೆಪಟ್ಟಿಗಳಿಗೂ ಅತೀತರಾಗಿ ತಮ್ಮ ಕಾವ್ಯಲತೆಯನ್ನು ಹಬ್ಬಿಸಿದವರು ಅವರು. ‘ವಿಮರ್ಶಕ ಪ್ರಭುಗಳು‘ ಎಷ್ಟೇ ಕಷ್ಟಪಟ್ಟು ಇದರ ರೆಂಬೆಕೊಂಬೆಗಳನ್ನು ಕಡಿಯಲು ಯತ್ನಿಸಿದರೂ ಅದು ಮತ್ತಷ್ಟು ಟಿಸಿಲೊಡೆಯಿತೇ ಹೊರತು ಬತ್ತಲಿಲ್ಲ. ಇದಕ್ಕೆ ಕಾರಣ ಅವರ ಕವನಗಳೊಂದಿಗೆ ಶ್ರೀಸಾಮಾನ್ಯರು ಬೆಳೆಸಿಕೊಂಡ ತಾದಾತ್ಮ್ಯತೆ. ತಮ್ಮೆಲ್ಲ ನೋವು-ನಲಿವು. ಸುಖ-ದುಃಖಗಳೇ ಅವರ ಕಾವ್ಯಕನ್ನಡಿಯಲ್ಲಿ ಪ್ರತಿಫಲಿತವಾಗಿರುವುದನ್ನು ಕಂಡ ಜನ, ಅದನ್ನು ತಮ್ಮ ಭಾವನೆಗಳ ಅಭಿವ್ಯಕ್ತಿಯೆಂದೇ ಭಾವಿಸಿ ಒಪ್ಪಿಕೊಂಡರು. ಭೈರಪ್ಪನವರ ಕೃತಿಗಳ ಜನಪ್ರಿಯತೆಯ ಒಳಗುಟ್ಟೂ ಇದೇ.
ಪ್ರತಿಯೂಬ್ಬ ಭಾರತೀಯನೂ ಜನ್ಮತಃ ತತ್ತ್ವಜ್ಞಾನಿ..... READ MORE....
No comments:
Post a Comment