Showing posts with label Kannada Jokes. Show all posts
Showing posts with label Kannada Jokes. Show all posts

Wednesday, 28 August 2013

Kannadada Kotyadipati-Joke



ಕನ್ನಡದ ಕೋಟ್ಯಾಧಿಪತಿ ವಿರುದ್ದ ತಿರುಗಿಬಿದ್ದ ಗುಂಡ
ಗುಂಡ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹೇಗಾದರೂ ಭಾಗವಹಿಸಿ ಪುನೀತ್ ರಾಜಕುಮಾರ್ ಜೊತೆ ಆಡಲೇ ಬೇಕೆಂದು ಜಿದ್ದಿಗೆ ಬಿದ್ದು ಒಂದು ನೂರು ಮೆಸೇಜ್ ಮಾಡಿದ.
ಅವನ ಅದೃಷ್ಟ ಖುಲಾಯಿಸಿತು, ಗುಂಡ ಕಾರ್ಯಕ್ರಮಕ್ಕೆ ಸಿಲೆಕ್ಟ್ ಆದ. ಚೆನ್ನೈಗೆ ಬರಲು ಕರೆಕೂಡ ಬಂತು. ಖುಷಿಗೆ ಪಾರವೇ ಇಲ್ಲದ ಗುಂಡ ಐರಾವತ ಬಸ್ ಏರಿ ಜಯಕ್ಕನ ಊರಿಗೆ ಹೊರಟ. ಪಂಚೆ, ಶರ್ಟ್, ಹಣೆಯಲ್ಲಿ ಕುಂಕುಮ ಇಟ್ಟುಕೊಂಡು ಅಪ್ಪಟ ದೇಸೀ ಸೊಗಡಿನಲ್ಲಿ ಹತ್ತು ಜನರಲ್ಲಿ ಒಬ್ಬನಾಗಿ ಆಯ್ಕೆ ಕೂಡಾ ಆದ.

Friday, 23 August 2013

Husband Wife Jokes

ಗುಂಡ ಮತ್ತು ಅವನ ಹೆಂಡತಿ ಬಟ್ಟೆ ಅಂಗಡಿಯಲ್ಲಿದ್ದರು.
ಗುಂಡ: ಸೀರೆ ನೀನೆ ಆರಿಸು. ನೀನೆ ತಾನೇ ಉಡೋದು..
 ಗುಂಡಿ: ಪರವಾಗಿಲ್ಲ, ನೀವೇ ಆರಿಸಿ. ನೀವ್ ತಾನೇ ಒಗೆಯೋದು.

Just Laugh-Jokes

ಪ್ರತಿದಿನ ಗುಡೀಗಾ? ಯಾಕೆ? ಅದೂ ಬೆಳಿಗ್ಗೆ ಸಂಜೆ? 
ಪ್ರೇಮಿಗಳಿಬ್ಬರೂ ಕಬ್ಬನ್ ಪಾರ್ಕ್ ನಲ್ಲಿರುವ ಆಲದ ಮರದ ಕೆಳಗೆ ಇರುವ ಬೆಂಚಿನ ಮೇಲೆ ಕುಳಿತು, ಕೈಯಲ್ಲಿ ಕೈಯನ್ನು ಹಿಡಿದುಕೊಂಡು ಮಾತನಾಡುತ್ತಿರುತ್ತಾರೆ. ಯುವಕನ ಹೆಗಲ ಮೇಲೆ ತಲೆಯನ್ನಿಟ್ಟು ಯುವತಿ ಮಾತಿಗೆ ಶುರು ಹಚ್ಚಿಕೊಳ್ಳುತ್ತಾಳೆ. 
ಯುವತಿ : ಈ ವಾರ ಪೂರ್ತಿ ಪ್ರತಿದಿನ ಎರಡೆರಡು ಸಿನೆಮಾ ನೋಡೋಣ. ಏನಂತೀಯಾ? ಅದರ ಮುಂದಿನ ವಾರ ಪ್ರತಿದಿನ ಸಂಜೆ ಶಾಪಿಂಗ್ ಹೋಗೋಣ, ಏನಂತೀಯಾ?
ಯುವಕ : ಓಕೆ ಡಾರ್ಲಿಂಗ್. ಅದರ ಮುಂದಿನ ವಾರ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಇಲ್ಲೇ ಹತ್ತಿರದಲ್ಲಿದೆಯಲ್ಲ ಗುಡಿಗೆ ಹೋಗೋಣ. ಏನಂತೀಯಾ?
ಯುವತಿ : ಗುಡೀಗಾ? ಯಾಕೆ? ಅದೂ ಪ್ರತಿದಿನ? ಇಬ್ಬರಿಗೂ ಬೇಗನೆ ಮದುವೆ ಆಗಲಿ ಅಂತ ಬೇಡಿಕೊಳ್ಳುವುದಕ್ಕಾ?
ಯುವಕ : ಅಲ್ಲ, ಭಿಕ್ಷೆ ಬೇಡೋದಕ್ಕೆ! *** 

Monday, 19 August 2013

Kannada Jokes-Nakku Bidi !!

ಉದ್ಯೋಗದ ನಿಮಿತ್ತ ಕೋಲ್ಕತಾಗೆ ಹೋಗಿದ್ದ ಸುಬ್ಬು ತನ್ನ ಮುದ್ದಿನ ಮಡದಿ ಶೀಲಾ ಜೊತೆ ಮಾತನಾಡಬೇಕೆಂದು ಬೆಂಗಳೂರಿಗೆ ಫೋನ್ ಮಾಡುತ್ತಾನೆ. ಹೆಂಡತಿಯ ಬದಲು ಯಾರೋ ಬೇರೆಯವಳು ಫೋನ್ ಎತ್ತುತ್ತಾಳೆ.
 ಮನೆಗೆಲಸದಾಕೆ : (ವೈಯಾರದಿಂದ) ಹಲೋ
 ಸುಬ್ಬು : ಯಾರು?
ಮನೆಗೆಲಸದಾಕೆ : ನಾನು ಮನೆಗೆಲಸದವಳು.
 ಸುಬ್ಬು : ನನ್ನ ಹೆಂಡ್ತಿಗೆ ಫೋನ್ ಕೊಡ್ತಿಯಾ ಸ್ವಲ್ಪ, ಅವಳ ಜೊತೆ ಮಾತನಾಡಬೇಕು.
 ಮನೆಗೆಲಸದಾಕೆ : (ಗಲಿಬಿಲಿಯಾಗಿ, ಸಣ್ಣನೆ ದನಿಯಲ್ಲಿ) ಯಜಮಾನ್ರೆ, ಮೇಡಂ ತಮ್ಮ ಇನಿಯನ ಜೊತೆ ಮೇಲಿನ ಬೆಡ್ ರೂಂನಲ್ಲಿ ಸರಸವಾಡ್ತಾ ಇದ್ದಾರೆ.
 ಸುಬ್ಬು : ವಾಟ್? ನಾನಿಲ್ಲದ ಸಮಯದಲ್ಲಿ.... ಅವರಿಬ್ಬರನ್ನು ಗುಂಡಿಟ್ಟು ಉಡಾಯಿಸಿಬಿಡು. ಓಕೆ ಅಂದ ಮನೆಗೆಲಸದಾಕೆ ಯಜಮಾನ್ರು ಹೇಳಿದಂತೆ ರಿವಾಲ್ವರ್ ತೆಗೆದುಕೊಂಡು ಪ್ರಿಯತಮೆ ಮತ್ತು ಪ್ರಿಯತಮನನ್ನು ಢಂಢಂ ಅಂತ ಗುಂಡಿಟ್ಟು ಸಾಯಿಸಿಬಿಡುತ್ತಾಳೆ. 
ಮನೆಗೆಲಸದಾಕೆ : ಕೆಲಸ ಆಯ್ತು ಯಜಮಾನ್ರೆ. ಬಾಡಿಗಳನ್ನು ಏನು ಮಾಡಲಿ? 
ಸುಬ್ಬು : ಏನು ಮಾಡೋದೇನು? ಸ್ವಿಮ್ಮಿಂಗ್ ಪೂಲಲ್ಲಿ ಬಿಸಾಡಿಬಿಡು.
 ಮನೆಗೆಲಸದಾಕೆ : ಸ್ವಿಮ್ಮಿಂಗ್ ಪೂಲಾ? ಎಲ್ಲಿದೆ ಸ್ವಿಮ್ಮಿಂಗ್ ಪೂಲ್?
ಸುಬ್ಬು : ಹಲೋ, ಹಲೋ, ಹಲೋ, ನಾನು ಫೋನ್ ಮಾಡಿದ್ದು 22211 11222 ನಂಬರಿಗೆ ತಾನೆ? *** 
-----------------------------
ದೊಮ್ಮಲೂರಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಪುಟಾಣಿ ಗುಂಡ ಪ್ರಯಾಣ ಮಾಡುತ್ತಿರುತ್ತಾನೆ. ಡ್ರೈವರ್ ಹಿಂದೆಯೇ ನಿಂತಿದ್ದ ಗುಂಡ ಜೋರಾಗಿ ಒಂದೇ ಸವನೆ ಮಾತನಾಡುತ್ತಿರುತ್ತಾನೆ. ಡ್ರೈವರ್‌ಗೆ ಕಿರಿಕಿರಿಯಾದರೂ ಏನೂ ಮಾಡಲಾಗದೆ ಸಹಿಸಿಕೊಂಡಿರುತ್ತಾನೆ. ಗುಂಡನ ಮಾತುಗಳು ಹೀಗಿರುತ್ತವೆ... "ಅಪ್ಪ ಗಂಡು ಆನೆಯಾಗಿ ಅಮ್ಮ ಹೆಣ್ಣು ಆನೆಯಾಗಿ ಹುಟ್ಟಿದ್ದರೆ, ನಾನು ಪುಟ್ಟ ಗಂಡು ಆನೆಯಾಗಿರುತ್ತಿದ್ದೆ."
 "ಡ್ಯಾಡಿ ಬುಲ್ ಆಗಿದ್ದು ಮಮ್ಮಿ ಕೌ ಆಗಿದ್ದರೆ, ನಾನು ಪುಟಾಣಿ ಬುಲ್ ಆಗಿರುತ್ತಿದ್ದೆ." ಹೀಗೇ ಮಾತುಗಳು ಸಾಗುತ್ತಿರುತ್ತವೆ. ಒಂದಾದ ಮೇಲೊಂದರಂತೆ ಎಲ್ಲ ಪ್ರಾಣಿಗಳ ಹೆಸರುಗಳನ್ನು ತೆಗೆದುಕೊಂಡು ಇದೇ ರೀತಿ ಮಾತನಾಡುತ್ತಿರುತ್ತಾನೆ. ಕೇಳಿ ಕೇಳಿ ತಲೆಕಟ್ಟಂತವನಾದ ಡ್ರೈವರ್,
 "ಅಯ್ಯಾ ಮರಿ, ನಿಮ್ಮಪ್ಪ ಲೂಸ್ ಆಗಿ, ನಿಮ್ಮಮ್ಮ ಮೂರ್ಖಳಾಗಿದ್ದರೆ ನೀನು ಏನಾಗಿರುತ್ತಿದ್ದೆ?" ಪುಟಾಣಿ ಗುಂಡ ನಕ್ಕು, "ಬಸ್ ಡ್ರೈವರ್ ಆಗಿರುತ್ತಿದ್ದೆ!" ಡ್ರೈವರ್ ಗರ್ ಅಂತ ಬ್ರೇಕ್ ಹಾಕುತ್ತಾನೆ
Posted by: Prasad 

Super Star Rajnikanth Jokes

Super Star Rajani Kanth

 ರನ್ನಿಂಗ್ ರೇಸಲ್ಲಿ ರಜನಿ ಫಸ್ಟ್! ಸೆಕೆಂಡ್ ಯಾರು ?
* ರಜನಿಕಾಂತ್‌ಗೆ ಅಚಾನಕ್ಕಾಗಿ ಹಾರಿದ ಗುಂಡು ತಗುಲಿದ್ದರಿಂದ ಗುಂಡಿನ ಸಾವು! ಮರುದಿನ ಗುಂಡಿನ ಅಂತ್ಯಸಂಸ್ಕಾರ!

* ಪಾಕಿಸ್ತಾನದಲ್ಲಿನ ಭಯೋತ್ಪಾದಕನನ್ನು ರಜನಿಕಾಂತ್ ಇಲ್ಲಿಂದಲೇ ಸಾಯಿಸಿದ್ದು ಹೇಗೆ ಗೊತ್ತಾ? ಬ್ಲೂಟೂತ್ ಮುಖಾಂತರ!

* ತ್ರಿಜ್ಯ ಬಳಸಿ ನೇರವಾದ ಗೆರೆ ಎಳೆಯುವುದು ರಜನಿಕಾಂತ್‌ಗೆ ಮಾತ್ರ ಸಾಧ್ಯ.

* ರಜನಿಕಾಂತ್ ನಾಡಿಮಿಡಿತವನ್ನು ರಿಕ್ಟರ್ ಮಾಪಕದಿಂದ ಅಳೆಯುತ್ತಾರೆ.

* ರುಪಾಯಿ ಹೊಸ ಚಿಹ್ನೆ ಮತ್ತೇನೂ ಅಲ್ಲ, ಅದು ರಜನಿಕಾಂತ್ ಸಹಿ.

* ಮೇಡಂ ತೌಸಡ್ಸ್ ಪ್ರತಿಮೆಯನ್ನೇ ರಜನಿಕಾಂತ್ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದಾರೆ.

* ಒಂದು ರನ್ನಿಂಗ್ ರೇಸ್‌ನಲ್ಲಿ ರಜನಿ ಭಾಗವಹಿಸಿದ್ದರು. ಸಹಜವಾಗಿ ಅವರೇ ಮೊದಲಿಗರಾದರು. ಇದನ್ನು ನೋಡುತ್ತಿದ್ದ ಐನ್‌ಸ್ಟೀನ್ ಹಠಾತ್ತನೆ ಸಾವಿಗೀಡಾದರು. ಯಾಕೆ ಗೊತ್ತೆ. ಎರಡನೇ ಸ್ಥಾನ ಪಡೆದದ್ದು ಬೆಳಕು.

* ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದಿದ್ದು ಆಕಸ್ಮಿಕವಲ್ಲ, ಅದನ್ನು ಎಸೆದದ್ದು ರಜನಿಕಾಂತ್.

* ರಜನಿಕಾಂತ್ 5 ಬೇರೆಬೇರೆ ಭಾಷೆಗಳಲ್ಲಿ ಶಿಳ್ಳೆ ಹೊಡೆಯಬಲ್ಲರು. ನಿಮಗೆ ಸಾಧ್ಯವಾ?

* ಮೊನಾಲಿಸಾ ನಗುವಿನ ರಹಸ್ಯ ಇನ್ನೂ ಭೇದಿಸಲಾಗಿಲ್ಲ. ಆದರೆ, ಆ ರಹಸ್ಯ ರಜನಿಕಾಂತ್‌ಗೆ ಮಾತ್ರ ಗೊತ್ತು.

* ಅಂತಾರಾಷ್ಟ್ರೀಯ ನಳಪಾಕ ಸ್ಪರ್ಧೆಯಲ್ಲಿ ಭಾಗವಹಿಸಿ ರಜನಿಕಾಂತ್ ಮೊದಲನೇ ಸ್ಥಾನ ಪಡೆದರು. ಅವರು ಮಾಡಿದ ಸ್ವಾದಿಷ್ಟ ತಿನಿಸು ಯಾವುದು ಗೊತ್ತಾ? ಖಾರದ ಮೆಣಸಿನಕಾಯಿಯಿಂದ ಮಾಡಿದ ಸಿಹಿ ಖೀರು!Posted by: Prasad    

Rajnikanth Jokes


Super Star Rajani


 ಸಖತ್ ರಂಜಿಸುವ ರಜನಿಕಾಂತ್ ಜೋಕುಗಳು 
ಪ್ರೊಬ್ಯಾಬ್ಲಿ, ನಗದೆ ಇರುವವರನ್ನು ಕೂಡ ನಗಿಸುವಂಥ ಕೆಪ್ಯಾಸಿಟಿ ಇರುವುದು ರಜನಿಕಾಂತ್ ಜೋಕ್‌ಗಳಿಗೆ ಮಾತ್ರ ಇರಬಹುದು. ಆ ಜೋಕುಗಳೇ ಹಾಗೆ, ಒನ್ ಲೈನರ್ ಇದ್ರೂ ಕೂಡ ಡಬಲ್ ರಂಜನೆ ಕೊಡುತ್ತವೆ. ಅವುಗಳಲ್ಲಿ ಅಶ್ಲೀಲತೆ ಇರುವುದಿಲ್ಲ, ಸಿಕ್ಕಾಪಟ್ಟೆ ಸೀರಿಯಸ್ ಆಗಿರುವುದಿಲ್ಲ, ಮತ್ತೆ ಮುಖ್ಯವೆಂದರೆ, ಅವು ಉಳಿದ ಜೋಕುಗಳಂತೆ ಇರುವುದೇ ಇಲ್ಲ. ಅದೇ ರಜನಿಕಾಂತ್ ಜೋಕುಗಳ ಸ್ಪೆಷಾಲಿಟಿ. ಅಂಥ ಕೆಲ ಜೋಕುಗಳನ್ನು ಇಲ್ಲಿ ನೀಡಲಾಗಿದೆ. ಇಷ್ಟವಾದರೆ, ನಕ್ಕು ಮನಸ್ಸು ಹಗುರ ಮಾಡಿಕೊಳ್ಳಿ.
ಜೋಕ್ 1 : ಮುಂದಿನ ವರ್ಷ ಆಪಲ್ ಕಂಪನಿ ರಜನಿಕಾಂತ್ ಸರಣಿಯ ಐಪ್ಯಾಡ್ ಬಿಡುಗಡೆ ಮಾಡುತ್ತಿದೆಯಂತೆ. ಆ ಐಪ್ಯಾಡ್ ವಿಶೇಷತೆಯೇನೆಂದರೆ, ಟಚ್ ಸ್ಕ್ರೀನ್ ನಿಮ್ಮನ್ನೇ ಟಚ್ ಮಾಡುತ್ತದಂತೆ!
 ಜೋಕ್ 2 : ರಜನಿಕಾಂತ್ ಯಾವ ಪರಿ ಸ್ಪೀಡಾಗಿ ಓಡ್ತಾರಂದ್ರೆ, ಅವರು ಯಾವತ್ತೂ ನಿನ್ನೆ ಬರ್ತಾರೆ!
 ಜೋಕ್ 3 : ಒಂದು ಸತಿ ರಜನಿಕಾಂತ್ ಪರೀಕ್ಷೆಯಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದರು. ಆಗ ಏನಾಯ್ತು ಗೊತ್ತಾ? ಇನ್ನೇನಾಗತ್ತೆ ಟೀಚರೇ ಸಸ್ಪೆಂಡ್ ಆಗಿಬಿಟ್ಟರು!
 ಜೋಕ್ 4 : ದಶಕಗಳ ಹಿಂದೆ ರಜನಿಕಾಂತ್ ಕುದುರೆಯಿಲ್ಲದೆ ಕುದುರೆಯಂತೆ ಓಡುವುದು ಹೇಗೆಂದು ಕಂಡುಹಿಡಿದರು. ಅದೇ ಈಗ ಗಂಗ್ನಮ್ ಸ್ಟೈಲ್ ಎಂದು ಖ್ಯಾತಿಯಾಗಿದೆ!
 ಜೋಕ್ 5 : ಕೇವಲ ರಜನಿಕಾಂತ್‌ಗೆ ಮಾತ್ರ ಅವರ ಜನಪ್ರಿಯತೆಯ ಗುಟ್ಟು ಗೊತ್ತು. ಆ ಗುಟ್ಟು ಇನ್ನೂ ಗುಟ್ಟಾಗಿಯೇ ಉಳಿದಿದೆ!
 ಜೋಕ್ 6 : ಹಲ್ಲು ತೆಗೆಯದೆ ಗಹಗಹಿಸಿ ನಗುವುದು ಇಡೀ ಜಗತ್ತಿನಲ್ಲಿ ರಜನಿಕಾಂತ್ ಅವರಿಗೆ ಮಾತ್ರ! ನಿಮಗೆ ಸಾಧ್ಯವಾ?  Posted By Prasad 


Monday, 19 September 2011

Jokes



The Boss asked a Clerk working in his office without taking a leave for many months !!
:Why don't you take Leave due to you in this year ?"
Sir", replied the Clerk, "I need Some Rest" !!

More Jokes......

Kannada Film Stars: News and Views !!