All About Kannada, Kannada Poets, Actors, Achievers, Directors, Kannada Jokes, Popular Kannada Websites
Showing posts with label Rajnikanth Jokes. Show all posts
Showing posts with label Rajnikanth Jokes. Show all posts
Monday, 19 August 2013
Super Star Rajnikanth Jokes
| Super Star Rajani Kanth |
ರನ್ನಿಂಗ್ ರೇಸಲ್ಲಿ ರಜನಿ ಫಸ್ಟ್! ಸೆಕೆಂಡ್ ಯಾರು ?
* ರಜನಿಕಾಂತ್ಗೆ ಅಚಾನಕ್ಕಾಗಿ ಹಾರಿದ ಗುಂಡು ತಗುಲಿದ್ದರಿಂದ ಗುಂಡಿನ ಸಾವು! ಮರುದಿನ ಗುಂಡಿನ ಅಂತ್ಯಸಂಸ್ಕಾರ!
* ಪಾಕಿಸ್ತಾನದಲ್ಲಿನ ಭಯೋತ್ಪಾದಕನನ್ನು ರಜನಿಕಾಂತ್ ಇಲ್ಲಿಂದಲೇ ಸಾಯಿಸಿದ್ದು ಹೇಗೆ ಗೊತ್ತಾ? ಬ್ಲೂಟೂತ್ ಮುಖಾಂತರ!
* ತ್ರಿಜ್ಯ ಬಳಸಿ ನೇರವಾದ ಗೆರೆ ಎಳೆಯುವುದು ರಜನಿಕಾಂತ್ಗೆ ಮಾತ್ರ ಸಾಧ್ಯ.
* ರಜನಿಕಾಂತ್ ನಾಡಿಮಿಡಿತವನ್ನು ರಿಕ್ಟರ್ ಮಾಪಕದಿಂದ ಅಳೆಯುತ್ತಾರೆ.
* ರುಪಾಯಿ ಹೊಸ ಚಿಹ್ನೆ ಮತ್ತೇನೂ ಅಲ್ಲ, ಅದು ರಜನಿಕಾಂತ್ ಸಹಿ.
* ಮೇಡಂ ತೌಸಡ್ಸ್ ಪ್ರತಿಮೆಯನ್ನೇ ರಜನಿಕಾಂತ್ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದಾರೆ.
* ಒಂದು ರನ್ನಿಂಗ್ ರೇಸ್ನಲ್ಲಿ ರಜನಿ ಭಾಗವಹಿಸಿದ್ದರು. ಸಹಜವಾಗಿ ಅವರೇ ಮೊದಲಿಗರಾದರು. ಇದನ್ನು ನೋಡುತ್ತಿದ್ದ ಐನ್ಸ್ಟೀನ್ ಹಠಾತ್ತನೆ ಸಾವಿಗೀಡಾದರು. ಯಾಕೆ ಗೊತ್ತೆ. ಎರಡನೇ ಸ್ಥಾನ ಪಡೆದದ್ದು ಬೆಳಕು.
* ನ್ಯೂಟನ್ನ ತಲೆಯ ಮೇಲೆ ಸೇಬು ಬಿದ್ದಿದ್ದು ಆಕಸ್ಮಿಕವಲ್ಲ, ಅದನ್ನು ಎಸೆದದ್ದು ರಜನಿಕಾಂತ್.
* ರಜನಿಕಾಂತ್ 5 ಬೇರೆಬೇರೆ ಭಾಷೆಗಳಲ್ಲಿ ಶಿಳ್ಳೆ ಹೊಡೆಯಬಲ್ಲರು. ನಿಮಗೆ ಸಾಧ್ಯವಾ?
* ಮೊನಾಲಿಸಾ ನಗುವಿನ ರಹಸ್ಯ ಇನ್ನೂ ಭೇದಿಸಲಾಗಿಲ್ಲ. ಆದರೆ, ಆ ರಹಸ್ಯ ರಜನಿಕಾಂತ್ಗೆ ಮಾತ್ರ ಗೊತ್ತು.
* ಅಂತಾರಾಷ್ಟ್ರೀಯ ನಳಪಾಕ ಸ್ಪರ್ಧೆಯಲ್ಲಿ ಭಾಗವಹಿಸಿ ರಜನಿಕಾಂತ್ ಮೊದಲನೇ ಸ್ಥಾನ ಪಡೆದರು. ಅವರು ಮಾಡಿದ ಸ್ವಾದಿಷ್ಟ ತಿನಿಸು ಯಾವುದು ಗೊತ್ತಾ? ಖಾರದ ಮೆಣಸಿನಕಾಯಿಯಿಂದ ಮಾಡಿದ ಸಿಹಿ ಖೀರು!Posted by: Prasad
Rajnikanth Jokes
| Super Star Rajani |
ಸಖತ್ ರಂಜಿಸುವ ರಜನಿಕಾಂತ್ ಜೋಕುಗಳು
ಪ್ರೊಬ್ಯಾಬ್ಲಿ, ನಗದೆ ಇರುವವರನ್ನು ಕೂಡ ನಗಿಸುವಂಥ ಕೆಪ್ಯಾಸಿಟಿ ಇರುವುದು ರಜನಿಕಾಂತ್ ಜೋಕ್ಗಳಿಗೆ ಮಾತ್ರ ಇರಬಹುದು. ಆ ಜೋಕುಗಳೇ ಹಾಗೆ, ಒನ್ ಲೈನರ್ ಇದ್ರೂ ಕೂಡ ಡಬಲ್ ರಂಜನೆ ಕೊಡುತ್ತವೆ. ಅವುಗಳಲ್ಲಿ ಅಶ್ಲೀಲತೆ ಇರುವುದಿಲ್ಲ, ಸಿಕ್ಕಾಪಟ್ಟೆ ಸೀರಿಯಸ್ ಆಗಿರುವುದಿಲ್ಲ, ಮತ್ತೆ ಮುಖ್ಯವೆಂದರೆ, ಅವು ಉಳಿದ ಜೋಕುಗಳಂತೆ ಇರುವುದೇ ಇಲ್ಲ. ಅದೇ ರಜನಿಕಾಂತ್ ಜೋಕುಗಳ ಸ್ಪೆಷಾಲಿಟಿ. ಅಂಥ ಕೆಲ ಜೋಕುಗಳನ್ನು ಇಲ್ಲಿ ನೀಡಲಾಗಿದೆ. ಇಷ್ಟವಾದರೆ, ನಕ್ಕು ಮನಸ್ಸು ಹಗುರ ಮಾಡಿಕೊಳ್ಳಿ.
ಜೋಕ್ 1 : ಮುಂದಿನ ವರ್ಷ ಆಪಲ್ ಕಂಪನಿ ರಜನಿಕಾಂತ್ ಸರಣಿಯ ಐಪ್ಯಾಡ್ ಬಿಡುಗಡೆ ಮಾಡುತ್ತಿದೆಯಂತೆ. ಆ ಐಪ್ಯಾಡ್ ವಿಶೇಷತೆಯೇನೆಂದರೆ, ಟಚ್ ಸ್ಕ್ರೀನ್ ನಿಮ್ಮನ್ನೇ ಟಚ್ ಮಾಡುತ್ತದಂತೆ!
ಜೋಕ್ 2 : ರಜನಿಕಾಂತ್ ಯಾವ ಪರಿ ಸ್ಪೀಡಾಗಿ ಓಡ್ತಾರಂದ್ರೆ, ಅವರು ಯಾವತ್ತೂ ನಿನ್ನೆ ಬರ್ತಾರೆ!
ಜೋಕ್ 3 : ಒಂದು ಸತಿ ರಜನಿಕಾಂತ್ ಪರೀಕ್ಷೆಯಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿಬಿದ್ದರು. ಆಗ ಏನಾಯ್ತು ಗೊತ್ತಾ? ಇನ್ನೇನಾಗತ್ತೆ ಟೀಚರೇ ಸಸ್ಪೆಂಡ್ ಆಗಿಬಿಟ್ಟರು!
ಜೋಕ್ 4 : ದಶಕಗಳ ಹಿಂದೆ ರಜನಿಕಾಂತ್ ಕುದುರೆಯಿಲ್ಲದೆ ಕುದುರೆಯಂತೆ ಓಡುವುದು ಹೇಗೆಂದು ಕಂಡುಹಿಡಿದರು. ಅದೇ ಈಗ ಗಂಗ್ನಮ್ ಸ್ಟೈಲ್ ಎಂದು ಖ್ಯಾತಿಯಾಗಿದೆ!
ಜೋಕ್ 5 : ಕೇವಲ ರಜನಿಕಾಂತ್ಗೆ ಮಾತ್ರ ಅವರ ಜನಪ್ರಿಯತೆಯ ಗುಟ್ಟು ಗೊತ್ತು. ಆ ಗುಟ್ಟು ಇನ್ನೂ ಗುಟ್ಟಾಗಿಯೇ ಉಳಿದಿದೆ!
ಜೋಕ್ 6 : ಹಲ್ಲು ತೆಗೆಯದೆ ಗಹಗಹಿಸಿ ನಗುವುದು ಇಡೀ ಜಗತ್ತಿನಲ್ಲಿ ರಜನಿಕಾಂತ್ ಅವರಿಗೆ ಮಾತ್ರ! ನಿಮಗೆ ಸಾಧ್ಯವಾ? Posted By Prasad
Subscribe to:
Posts (Atom)