ಯಾರು ಹಿತವರು ನಿನಗೆ ....(Yaaru Hitavaru Ninage)
ಯಾರು ಹಿತವರು ನಿನಗೆ ಈ ಮೊವರೊಳಗೆ ||ಯಾರು ||
ನಾರಿಯೋ ? ಧಾರುಣಿಯೋ ? ಬಲುಘನದ ಸಿರಿಯೋ ? ||ಯಾರು||
ಅನ್ಯರಲಿ ಜನಿಸಿದ್ದ ಅಂಗನೆಯ ಕರ ತಂದು
ತನ್ನ ಮನೆಗವಳ ಯಜಮಾನಿಯೆನಿಸಿ
ಭಿನ್ನವಿಲ್ಲದಲರ್ಧ ದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಂಜುವಳು ಕಾಲವಶದೀ ||ಯಾರು ||
ಮುನ್ನ ಶತಕೋಟಿ ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರೆಸಿ
ಭಿನ್ನಣದ ಮನೆ ಕಟ್ಟಿ ಕೋಟಿ ಕೊತ್ತಲ ವಿಕ್ಕಿ
ಚನ್ನಿಗನ ಅಸುವಳಿಯೇ ಹೊರಗೆ ಹಾಕುವರೊ ||ಯಾರು ||
ಶೋಕವನು ಗೈಯುವರು ಸತಿ-ಸುತರು, ಭಾಂಧವರು
ಜೋಕೆ ತಪ್ಪಿದ ಬಳಿಕ ಅರ್ಥ ವ್ಯರ್ಥ
ಲೋಕದೊಳು ಗಳಿಸಿದ ಪಾಪ - ಪುಣ್ಯಗಳೆರಡು
ಸಾಕಾರವಾಗಿ ಸಂಗಡ ಬರುವವಲ್ಲದೆ ?
ನಾರಿಯೋ ? ಧಾರುಣಿಯೋ? ಬಲುಘನದ ಸಿರಿಯೋ ? ||ಯಾರು||
ಹತ್ತಿರದ ದೇಹವನು ನೆಚ್ಚಿ ನಂಬಿರಬೇಡ
ಪಕ್ಕದಲಿ ನೆನೆ ಕಂಡ ಹರಿಪಾದವಾ
ಚಿತ್ತದಲಿ ಸ್ತುತ್ತಿಸುತ್ತಾ ಪುರಂದರಾ ವಿಠಲನಾ
ಉತ್ತಮೋತ್ತಮನೆಂದು ಧೃತಿಯಾಗು ಮನುಜಾ ||ಯಾರು|
|-ರಚನೆ : ಪುರಂದರ ದಾಸರು (Purandara Daasaru)
No comments:
Post a Comment